ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! … Continue reading ಕವಿತೆ ಕಾರ್ನರ್